ವಲಾಕ್, ಆಟ್ಟೋ
	1847-1931. ಜರ್ಮನಿಯ ಆಗ್ರ್ಯಾನಿಕ್ ರಸಾಯನವಿe್ಞÁನಿ. 1867ರಲ್ಲಿ ಸ್ನಾತಕನಾದ ಈತ ತಾನು ಓದಿದ ಗಾಟಿಂಗೆನ್ ವಿಶ್ವವಿದ್ಯಾಲಯದಿಂದಲೇ ಪಿಎಚ್.ಡಿ. ಪದವಿ ಗಳಿಸಿದ. 1869ರಲ್ಲಿ ವೋಹ್ಲರ್ (1800-82) ಮತ್ತು ಹಾಫ್‍ಮನ್ (1818-92) ಸಹಚರ್ಯೆ ಯಲ್ಲಿ ಸಂಶೋಧನೆ. 1870ರಲ್ಲಿ ಬಾನ್ ವಿಶ್ವವಿದ್ಯಾಲಯದಲ್ಲಿ ಕೆಕುಲೆ (1829-96) ಬಳಿ ಹತ್ತೊಂಬತ್ತು ವರ್ಷ ಶಿಷ್ಯವೃತ್ತಿ, ಏತನ್ಮಧ್ಯೆ(1876) ಅಲ್ಲೇ ಪ್ರಾಧ್ಯಾಪಕನಾಗಿ ಸೇವೆ. 1879ರಲ್ಲಿ ಔಷಧವಿe್ಞÁ ನಕ್ಷೇತ್ರಕ್ಕೆ ಪ್ರವೇಶ. ಈ ಅವಧಿಯಲ್ಲಿ ಇವನು ನೈಸರ್ಗಿಕ ಉತ್ಪನ್ನಗಳಲ್ಲಿ ಸಂಯುಕ್ತಗಳ ಆಂತರಿಕ ರಚನೆ ಬಗ್ಗೆ ಪ್ರಯೋಗಗಳಲ್ಲಿ ನಿರತನಾಗಿರಬೇಕಾ ದುದು ಅನಿವಾರ್ಯವಾಗಿತ್ತು. ಏಕೆಂದರೆ ಬಹುತೇಕ ಸಂಯುಕ್ತಗಳಿಗೆ ಔಷಧೀಯ ಗುಣವಿತ್ತು. ಕೆಕುಲೆ ಅಲ್ಲಿಯ ತನಕ ಸು. 15 ವರ್ಷ ಗಾಜಿನ ಸೀಸೆಗಳಲ್ಲಿ ಭದ್ರವಾಗಿ ಕೂಡಿಟ್ಟಿದ್ದ ಚಂಚಲ ತೈಲಗಳ ಮಾದರಿಗ ಳನ್ನು ಬಳುವಳಿಯಾಗಿತ್ತು “ಇವುಗಳ ಅಣುರಚನೆಯ ನಿರ್ಣಯ ಬಲು ಕಷ್ಟ. ಶುದ್ಧರೂಪದಲ್ಲಿ ಪಡೆಯುವುದು ಅತಿ ಪ್ರಯಾಸ. ಆದ್ದರಿಂದ ಈ ದಿಸೆಯಲ್ಲಿ ನೀನು ಜಯಶಾಲಿಯಾಗುವುದು ಅನುಮಾನ” ಎಂದು ಎಚ್ಚರಿಸಿದ. ಆ ತೈಲಗಳಲ್ಲಿ ಟರ್ಪೀನ್‍ಗಳೆಂಬ ಹೈಡ್ರೊಕಾರ್ಬನ್‍ಗಳಿದ್ದವು. ಅಂದು ಜನಸಾಮಾನ್ಯಕ್ಕೆ ಪರಿಚಿತವಾಗಿದ್ದ ಮೆಂತಾಲ್ ಮತ್ತು ಕರ್ಪೂರ ಸಹ ಟರ್ಪೀನ್‍ಗಳೆಂದು ವಲಾಕ್ ತೋರಿಸಿದ. ಈಗ ನಮಗೆ ಗೊತ್ತಿರುವ ಜೀವಸತ್ತ್ವ ಂ ಮತ್ತು ಆ ಮತ್ತು ಹಲವು ಲೈಂಗಿಕ ಹಾರ್ಮೋನ್‍ಗಳು ಸಹ ಟರ್ಪೀನ್ ಸಂಬಂಧಿಗಳು. ಒಂದು ಟರ್ಪೀನನ್ನು ಮತ್ತೊಂದರಿಂದ ಬೇರ್ಪಡಿಸುವುದು ಶ್ರಮದಾಯಕವಾಗಿತ್ತು. ಆದರೆ ಎದೆಗೆಡದೆ ವಲಾಕ್ ಅವುಗಳ ರಾಸಾಯನಿಕ ಸಂಯೋಜನೆ ಮತ್ತು ರಚನಾಸೂತ್ರಗಳನ್ನು ನಿರ್ಣಯಿಸುವುದರಲ್ಲಿ ಯಶಸ್ವಿಯಾದ. ಇದರ ಸಲುವಾಗಿ ಇವನು 25 ವರ್ಷ ಪರ್ಯಂತ ದುಡಿಯಬೇಕಾಯಿತು. ಅನೇಕ ಟರ್ಪೀನ್‍ಗಳಿಗೆ ಸುವಾಸನೆಯುಂಟು. ಆಧುನಿಕ ಪರಿಮಳಗಳ ಉದ್ಯಮಕ್ಕೆ ವಲಾಕನ ಸಂಶೋಧನೆ ನಾಂದಿಯಾಯಿತು. ಈ ವಿಶೇಷ ಸಂಶೋಧನೆಯನ್ನು ಮೆಚ್ಚಿ 1910ರಲ್ಲಿ ಇವನಿಗೆ ನೊಬೆಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
												(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ